Ibrahim Bagalkot - chellidaro malligeyo lyrics

Published

0 224 0

Ibrahim Bagalkot - chellidaro malligeyo lyrics

ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ || ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ || ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ || ಮಲ್ಲಿಗೆ ಹೂವಿನ ಮಂಚಾ ಮರುಗಾದ ಮೇಲೊದಪು ತಾವರೆ ಹೂವು ತಲೆದಿಂಬು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ || ಹೊತ್ತು ಮುಳುಗಿದರೇನೂ ಕತ್ತಲಾದರೇನು ಅಪ್ಪಾ ನಿನ ಪರುಸೆ ಬರುವೆವು ನಾವು ಚೆಲ್ಲಿದರು ಮಲ್ಲಿಗೆಯ ||